ದೊಡ್ಡ ಮಟ್ಟದ ಸಂಪಾದನೆ ಇರಬೇಕಾದರೆ ಡಾಕ್ಟರ್‌, ಎಂಜಿನಿಯರ್‌ ಅಥವಾ ಸಾಫ್ಟವೇರ್‌ ಎಂಜಿನಿಯರ್‌ ಆಗಿರಬೇಕು ಎನ್ನುವುದು ಬಹುತೇಕ ಜನರ ಮನಸ್ಸಿನಲ್ಲಿ ಇರುವ ಯೋಚನೆ. ಆದರೆ ಇದು ಸುಳ್ಳು ಎನ್ನುವುದನ್ನು ಸಾಬೀತು ಮಾಡಿದ್ದಾರೆ ಮೇಕಪ್‌ ಆರ್ಟಿಸ್ಟ್‌ ಒಬ್ಬರು. ದೆಹಲಿ ಮೂಲದ ಮೇಕಪ್ ಆರ್ಟಿಸ್ಟ್‌ ಮೊಮಿನಾ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿದ್ದಾರೆ.