ರಕ್ತಪಾತವಿಲ್ಲದೆ ಯಶಸ್ಸು ಕಂಡ 'ಪ್ರೇಮದ ಊರಲಿ' ಚಿತ್ರವು ಜನರ ಮನಸ್ಸು ಗೆದ್ದಿದೆ. ಈ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ನಟ ರಂಗಾಯಣ ರಘು ಅವರು ನಾಯಕಿಯರಾದ ತಪಸ್ವಿನಿ ಮತ್ತು ರಮಿಕಾ ಅವರಿಂದ ವಿಶೇಷ ಭರವಸೆಯೊಂದನ್ನು ಪಡೆದರು. ಬೇರೆ ಭಾಷೆಯ ಚಿತ್ರರಂಗಕ್ಕೆ ಹೋದರೂ ಕನ್ನಡಿಗರು ಎಂಬುದನ್ನು ಮರೆಯಬಾರದು ಎಂದು ಅವರು ಪ್ರಮಾಣ ಮಾಡಿಸಿಕೊಂಡರು.