ಬಿಗ್ ಬಾಸ್ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ತಾಂಡವ್ ರಾಮ್ ಹಾಗೂ ಗಗನ್ ಸ್ನೇಹದ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಸೌಂದರ್ಯಾ ತಾಂಡವ್ ಅವರನ್ನು ಡಂಬ್ ಎಂದಾಗ ಗಗನ್ ಮೌನವಾಗಿದ್ದರು. ಇದನ್ನು ಒನ್ ವೇ ಫ್ರೆಂಡ್ ಶಿಪ್ ಎಂದು ಕಿಡಿಕಾರುತ್ತಾ ಗಗನ್ ಗೆಳೆತನಕ್ಕೆ ತಾಂಡವ್ ಅರ್ಹರಲ್ಲ ಎಂದು ಸುದೀಪ್ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.