ವೆಸ್ಟ್ ಇಂಡೀಸ್ ಸರಣಿ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸಕ್ಕೆ ಹೊರಡಲಿದ್ದು, 2020ರ ನಂತರ ಮೊದಲ ಸಂಪೂರ್ಣ ಸರಣಿ ಇದಾಗಿದೆ. ಬಿಗಿಯಾದ ವೇಳಾಪಟ್ಟಿಯಿಂದಾಗಿ ಎರಡು ಪ್ರತ್ಯೇಕ ಏಕದಿನ ತಂಡಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಶುಭ್​ಮನ್ ಗಿಲ್, ಬುಮ್ರಾ ಅವರಂತಹ ಪ್ರಮುಖ ಆಟಗಾರರಿಗೆ ಟೆಸ್ಟ್ ಸರಣಿಗೆ ಸಿದ್ಧತೆಗಾಗಿ ವಿಶ್ರಾಂತಿ ನೀಡಬಹುದು.