ಕೊಡಗಿನ ಭಾಗಮಂಡಲದಲ್ಲಿ ತುಡುವೆ ಜೇನು ಪೆಟ್ಟಿಗೆಗಳಿಗೆ ಥಾಯ್ ಸ್ಯಾಕ್ ಬ್ರೂಡ್ ವೈರಸ್ ಮತ್ತೆ ಕಾಣಿಸಿಕೊಂಡಿದ್ದು, ಕೃಷಿಕರಲ್ಲಿ ಆತಂಕ ಮೂಡಿಸಿದೆ. ಈ ರೋಗದಿಂದ ಲಾರ್ವಾಗಳು ಸಾಯುತ್ತಿದ್ದು, ಜೇನು ಕುಟುಂಬಗಳು ನಾಶವಾಗುತ್ತಿವೆ. ಸ್ಥಳೀಯ ತಳಿಗಳಿಗೆ ಹರಡುತ್ತಿರುವ ಈ ವೈರಸ್ ನಿಯಂತ್ರಣಕ್ಕೆ ಬಾರದೆ ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ.