ಐಸಿಸಿ ಅನುದಾನ ತಡೆ ಹಿಡಿದಿರುವುದು ಮತ್ತು ಮುಂದಿನ ವರ್ಷ ಭಾರತದ ಪ್ರವಾಸ ಇಲ್ಲದಿರುವುದರಿಂದ 2027ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ₹627 ಕೋಟಿ ನಷ್ಟವಾಗುವ ಸಾಧ್ಯತೆಯಿದೆ. ಈ ನಷ್ಟದಿಂದಾಗಿ ಇಂಗ್ಲೆಂಡ್‌ನ ದೇಸಿ ಮತ್ತು ಕೌಂಟಿ ಕ್ರಿಕೆಟ್ ಕೂಡ ತೀವ್ರ ಆರ್ಥಿಕ ಸಂಕಷ್ಟ ಎದುರಿಸುವ ಭೀತಿ ಎದುರಾಗಿದೆ.