ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ ದೇವರಕೊಂಡ ಜೋಡಿ ಏನ್‌ ಮಾತಾಡಿದ್ರೂ ಸುದ್ದಿ ಆಗುತ್ತೆ. ಮದುವೆ ಆದಂದಿನಿಂದ ಸದಾ ಒಂದಿಲ್ಲೊಂದು ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುತ್ತಲೇ ಬಂದಿರುವ ಈ ಜೋಡಿ, ಮದುವೆಯ ನಂತರ ಫಾರಿನ್‌ ಟೂರ್‌, ಔಟಿಂಗ್‌ ಅಂತೆಲ್ಲ ಗಮನಸೆಳೆದದ್ದು ಕಡಿಮೆ.