ರಾತ್ರಿ ತಡವಾಗಿ ಊಟ ಮಾಡುವುದೇ ನೇರವಾಗಿ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎನ್ನಲು ಸಾಧ್ಯವಿಲ್ಲ. ಆದರೆ ನಿದ್ರೆ ಮಾಡುವ ಮೊದಲು ಅತಿಯಾಗಿ ಊಟ ಮಾಡುವುದು, ಹೆಚ್ಚಿನ ಕ್ಯಾಲೊರಿ ಇರುವ ಆಹಾರ ಸೇವನೆ ಮಾಡುವುದರಿಂದ ನಿದ್ರೆ ಮತ್ತು ತೂಕ ಹೆಚ್ಚಳದಂತಹ ಅಂಶಗಳು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.