ಮುಂಬೈನ 'ಜಲ್ಸಾ' ನಿವಾಸವನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬಂದ ಬೆದರಿಕೆ ಇಮೇಲ್ ಬಾಲಿವುಡ್ ಶೆಹನ್‌ಶಾ ಅಮಿತಾಭ್ ಬಚ್ಚನ್ ಅವರ ಅಭಿಮಾನಿಗಳ ಭೇಟಿಯ ಸಂಪ್ರದಾಯವನ್ನು ತಡೆಯಲು ಸಾಧ್ಯವಾಗಿಲ್ಲ. ಆದರೆ, ಎಂದಿನಂತೆ ತೆರೆದ ಜಾಗದಲ್ಲಿ ನಿಲ್ಲುವ ಬದಲು, ಬಿಗ್ ಬಿ ಬುಲೆಟ್‌ಪ್ರೂಫ್ ಗ್ಲಾಸ್‌ನ ಹಿಂದಿನಿಂದಲೇ ಜನರಿಗೆ ಕೈಮುಗಿದು ದರ್ಶನ ನೀಡಿದ್ದಾರೆ.