ಚಹಾ ಮಾಡಿದ ನಂತರ ಉಳಿಯುವ ಪುಡಿಯನ್ನು ಎಸೆಯುವ ಬದಲು ಗಿಡಗಳಿಗೆ ಗೊಬ್ಬರವಾಗಿ ಮತ್ತು ಪಾತ್ರೆಗಳ ದುರ್ವಾಸನೆ ಹೋಗಲಾಡಿಸಲು ಬಳಸಬಹುದು. ಇದನ್ನು ಚೆನ್ನಾಗಿ ತೊಳೆದು ಒಣಗಿಸಿ ಗಾಜು ಸ್ವಚ್ಛಗೊಳಿಸಲು ಹಾಗೂ ಪಾದಗಳ ಆಯಾಸ ಮತ್ತು ವಾಸನೆ ನಿವಾರಿಸಲೂ ಉಪಯೋಗಿಸಬಹುದು.