ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಅಟ್ಟಹಾಸ ಮುಂದುವರಿದಿದೆ. ಇತ್ತೀಚೆಗೆ ಕೈಗಾರಿಕೆಗಳ ವಿಷಕಾರಿ ನೀರು ಭೀಮಾ ನದಿಗೆ ಹರಿಸಿ ಅನಾರೋಗ್ಯ ಭೀತಿ ಉಂಟು ಮಾಡಲಾಗಿತ್ತು. ಇದೀಗ ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಅಕ್ರಮವಾಗಿ ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.