ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಸಹ-ಪೈಲಟ್ ಅಪಹರಿಸಲು ಯತ್ನಿಸಿದಾಗ ಆಕಾಶದಲ್ಲೇ ಹೊಡೆದುರುಳಿಸಲು ಇಸ್ರೇಲ್ ಸಜ್ಜಾಗಿತ್ತು. 170 ಪ್ರಯಾಣಿಕರಿದ್ದರೂ, ದೇಶದ ಭದ್ರತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಕ್ಯಾಪ್ಟನ್ ಹಾಗೂ ಸಿಬ್ಬಂದಿ ಸಹಕಾರದಿಂದ ಅಪಹರಣ ಯತ್ನ ವಿಫಲಗೊಂಡು ವಿಮಾನ ಸುರಕ್ಷಿತವಾಗಿ ಇಳಿಯಿತು.