ಬೆಂಗಳೂರು: ಕರ್ನಾಟಕದಲ್ಲಿ ಬಿಯರ್ ಮಾರಾಟಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ. 2026ರ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಎರಡನೇ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಿಯರ್‌ ಮಾರಾಟ 49.69% ಏರಿಕೆಯಾಗಿದೆ. ಕಡಿಮೆ ಅಬಕಾರಿ ಸುಂಕ ಹಾಗೂ ದೀರ್ಘಕಾಲ ಮುಂದುವರಿದ ಬಿಸಿಲಿನ ವಾತಾವರಣದಿಂದ ಬಿಯರ್‌ ಬೇಡಿಕೆ ಹೆಚ್ಚಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.