ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಬಹುನಿರೀಕ್ಷೆಯಿಂದ ಕಾಯುತ್ತಿರುವ 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾದಾಗ, ಪರಿಷ್ಕೃತ ವೇತನ ಯಾವ ದಿನಾಂಕದಿಂದ ಅನ್ವಯವಾಗಲಿದೆ ಎಂಬ ಪ್ರಶ್ನೆ ಇದೀಗ ಮಹತ್ವ ಪಡೆದುಕೊಂಡಿದೆ. ಆಯೋಗಕ್ಕೆ ಶಿಫಾರಸು ಸಲ್ಲಿಸಲು 18 ತಿಂಗಳ ಕಾಲಾವಕಾಶವಿರುವುದರಿಂದ, ಶಿಫಾರಸುಗಳು 2027ರ ಮಧ್ಯಭಾಗದ ವೇಳೆಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ.