ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರ ಡ್ಯಾಮ್‌ಗೆ ಪ್ರವಾಸಕ್ಕೆ ಬಂದಿದ್ದ ತಾಯಿ, ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮುಳುಗುತ್ತಿದ್ದ ತಂದೆ ಹಾಗೂ ಮಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ರೇಖಾ (39) ಹೇಮಂತ್ (19) ಮೃತ ದುರ್ದೈವಿಗಳು. ರಾಜು ಹಾಗೂ ಮಗಳು ದೀಪ ಅಪಾಯದಿಂದ ಪಾರಾಗಿದ್ದಾರೆ.