ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಈಗಾಗಲೇ ಕೈವಶ ಮಾಡಿಕೊಂಡಿರುವ ಭಾರತ, 4ನೇ ಪಂದ್ಯದಲ್ಲಿ ಬೆಂಚ್ ಆಟಗಾರರಿಗೆ ಮಣೆಹಾಕಲು ಮುಂದಾಗಿದೆ. ಇಶಾನ್ ಕಿಶನ್, ಕುಲ್‌ದೀಪ್ ಯಾದವ್ ಮತ್ತು ಮಯಾಂಕ್ ಯಾದವ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಕಳಪೆ ಫಾರ್ಮ್‌ನಲ್ಲಿರುವ ಭುವನೇಶ್ವರ್ ಕುಮಾರ್‌ಗೆ ಕೊಕ್ ನೀಡುವ ನಿರೀಕ್ಷೆಯಿದೆ.