4 ರಾಜ್ಯಗಳ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಜಯಭೇರಿ ಬಾರಿಸಿದರೂ, ವಾರಣಾಸಿ ಮತ್ತು ನಾಗ್ಪುರದಂತಹ ಪ್ರಮುಖ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಕ್ಲೀನ್ ಸ್ವೀಪ್ ಮಾಡಿದ್ದರೆ, ಬಿಹಾರದಲ್ಲಿ ಪ್ರಶಾಂತ್ ಕಿಶೋರ್ ಅವರ ಪಕ್ಷ ಖಾತೆ ತೆರೆದಿದೆ. ಈ ಫಲಿತಾಂಶಗಳು ಮುಂಬರುವ ಚುನಾವಣೆಗಳಿಗೆ ಹೊಸ ಸಂದೇಶ ರವಾನಿಸಿವೆ.