ನೆಲಮಂಗಲ: ಅಕ್ರಮವಾಗಿ ಕಸಾಯಿಖಾನೆ ಸಾಗಿಸುತ್ತಿದ್ದ ಜಾನುವಾರುಗಳ ಖಚಿತವಾದ ಮಾಹಿತಿ ಮೇರೆಗೆ ನೆಲಮಂಗಲ (Nelamangala) ಡಿವೈಎಸ್ ಪಿ ಉಮಾರಾಣಿ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ ಮಾಡಿ ಜಾನುವಾರುಗಳನ್ನ ರಕ್ಷಣೆ ಮಾಡಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ಕೂತಗಟ್ಟ ಗ್ರಾಮದಲ್ಲಿ ನಡೆದಿದೆ.