ಕೈರೋ: ಈಜಿಪ್ಟ್ (Egypt) ರಾಜಧಾನಿ ಕೈರೋ ಸಮೀಪ ಭಾನುವಾರ 2 ರೈಲುಗಳ ನಡುವೆ ಭೀಕರ ಡಿಕ್ಕಿಯಾಗಿ (Trains Collide) ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಓರ್ವ ಲೊಕೋಪೈಲಟ್‌ ಕೂಡ ಇದ್ದು, 125 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಿಜಾ ಪ್ರಾಂತ್ಯದ ಅಲ್-ಅಯ್ಯತ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.