ಗಿರೀಶ್ ಲಿಂಗಣ್ಣ(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಅಕ್ಟೋಬರ್ 2ರ ಮುಂಜಾನೆ 4:35ರ ಸುಮಾರಿಗೆ, ಬಹುತೇಕ ಭಾರತ ಇನ್ನೂ ಸಿಹಿ ನಿದ್ದೆಯಲ್ಲೇ ಇದ್ದಾಗ ಗ್ರೇಸ್ ಎನ್ನುವ ಹೆಸರಿನ ಒಂದು ಕ್ಯಾಪ್ಸೂಲ್ ಭೂಮಿಯಿಂದ ಬಹುತೇಕ 400 ಕಿಲೋಮೀಟರ್ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿ, ಅದರ ಬಾಗಿಲೊಂದಕ್ಕೆ ಅಳವಡಿಕೆಯಾಯಿತು.