ತಮಿಳು ಸಿನಿಮಾಗಳಲ್ಲಿ ವಡಿವೇಲು ಅವರ ಮುಖ ಕಾಣಿಸಿಕೊಂಡರೆ ಸಾಕು, ಪ್ರೇಕ್ಷಕರ ಮೊಗದಲ್ಲಿ ನಗು ಮೂಡುತ್ತದೆ. ಅವರ ವಿಚಿತ್ರ ಮುಖಭಾವ, ವಿಶಿಷ್ಟ ಧ್ವನಿ, ಮ್ಯಾನರಿಸಂ, ಪಂಚ್ ಡೈಲಾಗ್‌ಗಳು ಹಾಗೂ ಟೈಮಿಂಗ್‌ಗೆ ಮರುಳಾಗದವರೇ ಇಲ್ಲ. ಆದರೆ, ವಡಿವೇಲು ಎಂದರೆ ಕೇವಲ ನಗಿಸುವ ಕಾಮಿಡಿ ನಟ ಮಾತ್ರವೇ ಅಲ್ಲ.