ಬೆಂಗಳೂರು: ರಾಜ್ಯ ಸರ್ಕಾರವು ಈ ಹಿಂದೆ ಮೀಸಲಾತಿಯನ್ನು ಶೇ.50 ರಿಂದ ಶೇ.56ಕ್ಕೆ ಹೆಚ್ಚಿಸಲಾಗಿತ್ತು. ಅದರಂತೆಯೇ ಸರ್ಕಾರ ನೇಮಕಾತಿಗಳನ್ನೂ ಮಾಡಿಕೊಂಡಿದೆ. ಇದೀಗ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಇದೀಗ ಮೀಸಲಾತಿ ಹೆಚ್ಚಿಸಿ ಆದೇಶಿಸಿದ ಬಳಿಕ ನಡೆದ ನೇಮಕಾತಿ, ಭರ್ತಿಗಳು ಕಥೆ ಏನು? ಎಂಬ ಆತಂಕ ಒಂದೆಡೆ ಶುರುವಾಗಿದೆ.