ರಾಜ್ಯ ಸರ್ಕಾರವು ರೈತರ ಜಮೀನಿನ ಪಹಣಿಯಲ್ಲಿ (ಆರ್‌ಟಿಸಿ) ಮಹತ್ವದ ಬದಲಾವಣೆ ತರುತ್ತಿದ್ದು, ಇನ್ನು ಮುಂದೆ ಭೂ ಮಾಲೀಕರ ಫೋಟೋ, ಆಧಾರ್ ಮತ್ತು ಕ್ಯೂಆರ್ ಕೋಡ್ ಮುದ್ರಣವಾಗಲಿದೆ. ನಕಲಿ ದಾಖಲೆ ತಡೆಯಲು ಮತ್ತು ಪೂರ್ಣ ಹಕ್ಕು ನೀಡಲು ಈ ಡಿಜಿಟಲ್ ವ್ಯವಸ್ಥೆ ಜಾರಿಯಾಗಲಿದೆ.