ಆರ್ಥಿಕ ತಜ್ಞರು ಅಂದಾಜಿಸಿದಂತೆ ಆರ್​ಬಿಐನ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು 25 ಮೂಲಾಂಕಗಳಷ್ಟು ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ. ಶೇ. 5.25ರಷ್ಟಿದ್ದ ರೆಪೋ ದರ ಈಗ ಶೇ. 5.50ಕ್ಕೆ ಏರಿದೆ. ಕಳೆದ ಮೂರು ಮೂರೂವರೆ ವರ್ಷದಲ್ಲೇ ಮೊದಲ ಬಾರಿಗೆ ಆರ್​ಬಿಐ ತನ್ನ ರೆಪೋ ದರ ಏರಿಸಿದಂತಾಗಿದೆ. ರೆಪೋ ದರ ಕೊನೆಯ ಬಾರಿ ಏರಿಕೆಯಾಗಿದ್ದು 2023ರ ಫೆಬ್ರುವರಿಯಲ್ಲಿ.