‘ಬಿಗ್‌ಬಾಸ್‌ ಕನ್ನಡ 13'ರ (Bigg Boss Kannada 13) ರಿಯಾಲಿಟಿ ಶೋ ಇದೀಗ ನಾಲ್ಕನೇ ವಾರಕ್ಕೆ ಎಂಟ್ರಿಕೊಡುವ ಸಂಭ್ರಮದಲ್ಲಿದೆ. ಮನೆಯೊಳಗೆ ಯಾರು ಉಳಿಯುತ್ತಾರೆ, ಯಾರು ಹೊರಗೆ ಬರುತ್ತಾರೆ ಅನ್ನೋ ಕುತೂಹಲದ ನಡುವೆಯೇ ಈ ವಾರ ಇಬ್ಬರು ಸ್ಪರ್ಧಿಗಳು ಶೋಗೆ ಗುಡ್‌ಬೈ ಹೇಳಿದ್ದಾರೆ. ಅವಿನಾಶ್ ಶಟಮರ್ಷನ್ ಮತ್ತು ವೈಷ್ಣವಿ ಕೌಂಡಿನ್ಯ ಅವರ ಎಲಿಮಿನೇಶನ್‌ ಇದೀಗ ಚರ್ಚೆಯಲ್ಲಿದೆ.