ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ವಂಚಕರು ಮುಗ್ಧ ಜನರನ್ನ ಬಲೆಗೆ ಬೀಳಿಸಿಕೊಳ್ಳಲು ಹೊಸ ಹೊಸ ತಂತ್ರಗಳನ್ನ ಬಳಸುತ್ತಿದ್ದಾರೆ. ಕಡಿಮೆ ಹೂಡಿಕೆಯಲ್ಲಿ ಲಕ್ಷಾಂತರ ರೂಪಾಯಿ ಗಳಿಸುವ ಆಮಿಷವೊಡ್ಡಿ ಜನರನ್ನ ನಂಬಿಸಿ ಮೋಸ ಮಾಡುವ ಜಾಲಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.