ನವದೆಹಲಿ: ಭಾರತದ(India) ಶತ್ರುಗಳನ್ನು ಗುರುತಿಸಿ ಅವರನ್ನು ಸದೆಬಡಿಯಲು ದೇಶದ ಜನರೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ. ದೆಹಲಿಯ ಐಪಿ ಎಕ್ಸ್‌ಟೆನ್ಷನ್ ಉತ್ಸವ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅದ್ಧೂರಿ ವಿಜಯದಶಮಿ(Vijayadashami) ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.