ಅಮೆರಿಕದ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಗಾಯಕಿ, ರಾಜಕೀಯ ವ್ಯಾಖ್ಯಾನಕಾರ್ತಿ ಅಲೆಕ್ಸಿಸ್ ವಿಲ್ಕಿನ್ಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾರತೀಯ ಮೂಲದ ಕಾಶ್ ಪಟೇಲ್ ಎಫ್‌ಬಿಐನ ಅತ್ಯುನ್ನತ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ. ಅಲೆಕ್ಸಿಸ್ ಸಂಗೀತ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ.