ಕರಿಬೇವಿನ ಎಲೆ ಅಥವಾ ಒಗ್ಗರಣೆ ಸೊಪ್ಪು ಅಡುಗೆಯ ಪ್ರಮುಖ ಭಾಗ. ಇವುಗಳಲ್ಲಿ ನಾರಿನಾಂಶ, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಸಂಯುಕ್ತಗಳಿವೆ. ಈ ಎಲೆಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಪೋಷಕಾಂಶಗಳು ದೊರೆಯುತ್ತವೆ.