ನೆಲಮಂಗಲ: ಅನುಮಾನ್ಪದ ರೀತಿಯಲ್ಲಿ ಮಂಗಳಮುಖಿ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬಾಡಿಗೆ ಮನೆಯ ರೂಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಬೆತ್ತಲೆಯಾಗಿ ಶವ ಪತ್ತೆಯಾಗಿದೆ. ಕುಳ್ಳಯ್ಯ @ ಬೆಳ್ಳಿ (40) ಮಂಗಳಮುಖಿ ಸಾವಿಗೀಡಾಗಿದ್ದು, ಅವರ ಪೋನ್ ನಾಪತ್ತೆ ಸಾಕಷ್ಟು ಅನುಮಾನ ಹುಟ್ಟಿಸಿದೆ. ಮೂಲತಃ ಮಂಡ್ಯ ಜಿಲ್ಲೆಯ ಹಲಗೂರು ಗ್ರಾಮದ ನಿವಾಸಿಯಾಗಿದ್ದರು.