ಲಿಖಿತ್ ಅವರು ಪ್ರಶಾಂತ್ ಅವರನ್ನು ‘ಇಡ್ಲಿ-ಮಸಿ’ ಎಂದು ಕರೆದಿದ್ದರು. ಪ್ರಶಾಂತ್ ನೋಡಲು ಕಪ್ಪು ವರ್ಣದವರಾಗಿದ್ದು, ಅದೇ ಕಾರಣಕ್ಕೆ ಅವರನ್ನು ಮಸಿಗೆ ಹೋಲಿಸಿದ್ದರು ಲಿಖಿತ್, ಪ್ರಶಾಂತ್ ಸಹ ಹೀಗೆಯೇ ತಿಳಿದುಕೊಂಡು ಲಿಖಿತ್ ಮೇಲೆ ಜಗಳ ಮಾಡಿದರು. ಪ್ರಶಾಂತ್ ಅವರು ತುಸು ಜೋರಾಗಿಯೇ ಜಗಳ ಮಾಡಿದ್ದರು. ಆದರೆ ಆ ವಿಷಯವನ್ನು ಅಲ್ಲಿಗೇ ಬಿಡಲಾಗಿತ್ತು.