ರಾಯಚೂರು: ಮುಂಗಾರು ಕೈಕೊಟ್ಟು, ಹಿಂಗಾರಿನಲ್ಲೂ ಮಳೆಯಾಗದೆ ಜೋಳದ ಬೆಳೆ ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರು ಟ್ಯಾಂಕರ್‌ ನೀರು ಖರೀದಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.