ಆಂಧ್ರಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ 22 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕ, ರವಿಚಂದ್ರನ್‌ ಸ್ಮರಣ್‌ ಅವರ ಅಮೋಘ ಶತಕದ ನೆರವಿನಿಂದ 274 ರನ್‌ ಕಲೆಹಾಕಿದೆ. ದಿನದಂತ್ಯಕ್ಕೆ ಬೌಲಿಂಗ್‌ನಲ್ಲೂ ಮಿಂಚಿದ ಕರ್ನಾಟಕ, ಆಂಧ್ರದ 2 ವಿಕೆಟ್‌ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.