Lovlina Borgohain: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ 2026ರಲ್ಲಿ ಭಾರತದ ಬಾಕ್ಸಿಂಗ್ ತಾರೆ ಲವ್ಲೀನಾ ಬೋರ್ಗೋಹೈನ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 75 ಕೆ.ಜಿ. ವಿಭಾಗದ ಫೈನಲ್ ಕದನದಲ್ಲಿ ಚೀನಾದ ಬಲಶಾಲಿ ಸ್ಪರ್ಧಿ ಜಿಯಿ ಬಾವೊ ಅವರನ್ನು ಪರಾಜಯಗೊಳಿಸುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಕೊಂಡಿದ್ದಾರೆ.