ಉತ್ತರ ಪ್ರದೇಶದಲ್ಲಿ ಇಡೀ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಾರಾಜ ಚೇತ್ ಸಿಂಗ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಗರ್ಭಿಣಿಯನ್ನ ಮುಟ್ಟಲು ನಿರಾಕರಿಸಿದ ಪರಿಣಾಮ, 20 ವರ್ಷದ ಯುವತಿ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.