ಹಿರಿಯೂರು: ತಾಲ್ಲೂಕಿನ ಜಮೀನುಗಳಲ್ಲಿನ ಪಂಪ್ ಸೆಟ್‌ಗಳಿಗೆ ಅಳವಡಿಸಿರುವ ಕೇಬಲ್‌ಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ರೈತರು ಹೈರಾಣಾಗಿದ್ದಾರೆ. ಪೊಲೀಸರು ಆದಷ್ಟು ಬೇಗ ಕೇಬಲ್ ಕಳ್ಳರನ್ನು ಬಂಧಿಸುವಂತೆ ತಾಲ್ಲೂಕು ರೈತಸಂಘ ಮತ್ತು ಹಸಿರು ಸೇನೆಯ ಗೌರವಾಧ್ಯಕ್ಷ ಆಲೂರು ಸಿದ್ದರಾಮಣ್ಣ ಒತ್ತಾಯಿಸಿದರು.