ಮಾರುಕಟ್ಟೆಯಿಂದ ತಂದ ಸೊಪ್ಪು ಹೆಚ್ಚು ದಿನ ಫ್ರೆಶ್ ಆಗಿರುವುದಿಲ್ಲ. ಕೆಲವೊಮ್ಮೆ ಬೆಲೆಯೂ ಹೆಚ್ಚಿರುತ್ತದೆ. ಹೀಗಿರುವಾಗ ಮನೆಯ ಬಾಲ್ಕನಿ, ಟೆರೇಸ್ ಅಥವಾ ಕಿಟಕಿಯ ಬಳಿ ಇರುವ ಸ್ವಲ್ಪ ಜಾಗದಲ್ಲೇ ಕೊತ್ತಂಬರಿ ಸೊಪ್ಪು ಬೆಳೆಸಬಹುದು. ಇದಕ್ಕೆ ದೊಡ್ಡ ತೋಟದ ಅಗತ್ಯವಿಲ್ಲ.