ಗದಗ: ಕಡಲೆ ಮಾರಾಟ ವಿಷಯಕ್ಕೆ ಸ್ನೇಹಿತನಿಗೆ ವಂಚಿಸಿ ಕೊಲೆ ಮಾಡಿದ ಘಟನೆ ಗದಗ (Gadag) ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ. 62 ವರ್ಷದ ದ್ಯಾಮಪ್ಪ ಗೊಜನೂರು ಕೊಲೆಯಾದ ಮೃತ ದುರ್ದೈವಿ. ಶರಣಪ್ಪ ನರಗುಂದ ಎಂಬ ಸ್ನೇಹಿತ ಕೊಲೆ ಆರೋಪಿ. ಕೊಲೆಯಾಗಿ 12 ದಿನಗಳ ನಂತರ ಸುಳಿವು ಸಿಕ್ಕಿದೆ. ದ್ಯಾಮಪ್ಪ ಮತ್ತು ಶರಣಪ್ಪ ಇಬ್ಬರೂ ಸ್ನೇಹಿತರಾಗಿದ್ದರು.