ಬೆಂಗಳೂರು: ಪೊಲೀಸ್ ಇಲಾಖೆ ಅವರ ಮನೆ ಆಳು ಏನ್ರಿ? ಮಾಹಿತಿ ಕೊಟ್ಟಿದ್ದೇವೆ, ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಅನ್ನೋದಲ್ಲ ಎಂದು ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ. ಮಾಧ್ಯಮದವರೊಂದಿಗೆ ಆರ್‌ಎಸ್‌ಎಸ್‌ಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, ನಾವು ಕೇಳಿರೋದರಲ್ಲಿ ತಪ್ಪೇನಿದೆ? ಏನಾದರೂ ಲೋಪ ಇದ್ರೆ ನಾವು ತಿದ್ದಿಕೊಳ್ಳುತ್ತೇವೆ.