ಚಿತ್ರದುರ್ಗ: ಚಿರತೆ ದಾಳಿಗೆ ಸಿಲುಕಿದ ರೈತನೋರ್ವ ಸಾವನ್ನಪ್ಪಿರುವ ಭೀಕರ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ತಾಲೂಕಿನ ದೊಡ್ಡಚಲ್ಲೂರು (Doddachalluru) ಗ್ರಾಮದ ಬಳಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಮನೆಯ ಸಮೀಪ ರೈತನ ಮೇಲೆ ಚಿರತೆ ದಾಳಿ ನಡೆಸಿದ್ದು, 65 ವರ್ಷದ ರೈತ ರಾಮಚಂದ್ರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.