ಬಾಲಿವುಡ್ ನಟಿ ಕೃತಿ ಸನನ್ (Kriti Sanon) ಅವರಿಗೆ ಸಂಬಂಧಿಸಿದ ಒಂದು ಜಾಹೀರಾತು ರಕ್ಷಾ ಬಂಧನ ಸಮಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಪ್ರಮುಖ ಆಭರಣ ಬ್ರಾಂಡ್ ಗಿವಾ (GIVA) ರೂಪಿಸಿದ್ದ ಈ ಜಾಹೀರಾತಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಯಾಗಿತ್ತು. ಮುಖ್ಯವಾಗಿ ಕೃತಿ ಅವರ ಉಡುಗೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.