ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸಾಹಿಬ್‌ಝಾದ ಫರ್ಹಾನ್ ನೇತೃತ್ವದ ಪಾಕಿಸ್ತಾನ್ ತಂಡವು ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ವಿಶೇಷವೆಂದರೆ, ಸೆಮೀಸ್ ತಲುಪುವ ಮುನ್ನ ಪಾಕ್ ಪಡೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ! ಅಂದರೆ, ಮೈದಾನಕ್ಕಿಳಿದು ಯಾವುದೇ ಮ್ಯಾಚ್ ಆಡದೆಯೇ ತಂಡವು ನೇರವಾಗಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಂತಾಗಿದೆ.