ನಿರ್ದಿಷ್ಟ ಯುಪಿಐ ಪಾವತಿಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಅಥವಾ ಎಂಡಿಆರ್ ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರವು ಕೋರ್ಟ್ ಕಟಕಟೆಯಲ್ಲಿ ವಿಚಾರಣೆ ಎದುರಿಸುತ್ತಿದೆ. ಶುಲ್ಕ ಜಾರಿಯಾಗದಂತೆ ತಡೆ ನೀಡಲು ಸುಪ್ರೀಂ ನ್ಯಾಯಪೀಠ ನಿರಾಕರಿಸಿದೆ. ವಕೀಲ ಅಂಜನ್ ದತ್ತಾ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಎಂಡಿಆರ್ ಶುಲ್ಕದ ಅಧಿಕೃತತೆಯನ್ನು ಪ್ರಶ್ನಿಸಿದ್ದರು.