1998ರಲ್ಲಿ ಚಿಲಿಯಿಂದ ಇಂಗ್ಲೆಂಡ್‌ನಲ್ಲಿರುವ ತಾಯಿಯ ಮನೆಗೆ ಕಾಲ್ನಡಿಗೆಯಲ್ಲಿ ಹೊರಟ ಕಾರ್ಲ್ ಬುಶ್ಬಿ 28 ವರ್ಷಗಳ ಬಳಿಕ ಬ್ರಿಟನ್ ತಲುಪಿದ್ದಾರೆ. ಸುಮಾರು 50,000 ಕಿ.ಮೀ ಕ್ರಮಿಸಿ, 29 ದೇಶಗಳನ್ನು ದಾಟಿರುವ ಅವರು ಬೇರಿಂಗ್ ಜಲಸಂಧಿ ಮತ್ತು ಕ್ಯಾಸ್ಪಿಯನ್ ಸಮುದ್ರದಂತಹ ಕಠಿಣ ಅಡೆತಡೆಗಳನ್ನೂ ಎದುರಿಸಿದ್ದಾರೆ.