ಪುಟ್ಟ ಮಗುವಿನೊಂದಿಗೆ ರೈಲು ಪ್ರಯಾಣ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಎರಡು ರಾತ್ರಿ ಸಾಗುವ ದೀರ್ಘ ಪ್ರಯಾಣವಾಗಿದ್ದರೆ ತಾಯಿಗೆ ಮಗುವಿನ ಊಟ, ಹಾಲು, ನಿದ್ರೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕಾಳಜಿ ಇರುತ್ತದೆ.