ಹಿಮಾಚಲ ಪ್ರದೇಶದ ಎತ್ತರದ ಪರ್ವತಗಳ ನಡುವೆ, ಹಿಮದಿಂದ ಆವೃತವಾದ ಶಿಖರಗಳು, ಕಂದು ಬಣ್ಣದ ಬಂಡೆಗಳು, ನೀಲಿ ಆಕಾಶ ಮತ್ತು ಮರುಭೂಮಿಯಂತೆ ಕಾಣುವ ವಿಶಾಲ ಭೂಪ್ರದೇಶ ಇವೆಲ್ಲ ಒಂದೇ ಸ್ಥಳದಲ್ಲಿ ಕಾಣಿಸುವುದು ಅಚ್ಚರಿಯ ಸಂಗತಿ. ಈ ಪ್ರಕೃತಿ ವೈವಿಧ್ಯದ ಅದ್ಭುತ ರೂಪವೇ `ಸ್ಪಿತಿ ವ್ಯಾಲಿ’.