ಬೆಂಗಳೂರು: ಕಳೆದ ಆರು ತಿಂಗಳಿನಿಂದ ವಿಧವಾ ವೇತನ ಮತ್ತು ವೃದ್ಧಾಪ್ಯ ಹಣ (Pension Pending) ಫಲಾನುಭವಿಗಳ ಕೈಸೇರಿಲ್ಲ. ಪೆನ್ಷನ್‌ ಹಣವನ್ನೇ ನಂಬಿಕೊಂಡಿದ್ದ ಎಷ್ಟೋ ವಯೋವೃದ್ದರು ಸರ್ಕಾರ ಬಾಕಿ ಹಣವನ್ನು ಯಾವಾಗ ಕೊಡುತ್ತದೋ ಎಂದು ಕಾಯುತ್ತಾ ಕೂರುವ ಪರಿಸ್ಥಿತಿ ಎದುರಾಗಿದೆ.