ಬಾಲಿವುಡ್​​ನ ಯುವ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ವಾಹನದಲ್ಲಿ ಹೋಗುವ ಸಂದರ್ಭದಲ್ಲಿ ಅಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಅವರ ಚಾಲಕ ಹಾಗೂ ಇನ್ನೊಬ್ಬ ಸಿಬ್ಬಂದಿಗೆ ಗಾಯವಾಗಿದೆ. ಇದೇ ಘಟನೆಯಲ್ಲಿ ಆಟೋ ಚಾಲಕರೊಬ್ಬರಿಗೂ ಸಹ ಗಾಯಗಳಾಗಿವೆ. ನಟ ಟೈಗರ್ ಶ್ರಾಫ್ ಅವರು ದಾಳಿಯಿಂದ ಪಾರಾಗಿದ್ದಾರೆ.