ಸಿನಿಮಾ ತಾರೆಯರ ಮೇಲೆ ಅಭಿಮಾನಿಗಳಿಗೆ ಇರೋ ಪ್ರೀತಿ ಕೆಲವೊಮ್ಮೆ ಎಲ್ಲೆ ಮೀರುತ್ತದೆ. ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುವ ಅಭಿಮಾನಿಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟ ಚಿರಂಜೀವಿ ಅವರ ಮೇಲೆ ಪ್ರೀತಿ ( love) ತೋರಿಸುವ ಭರದಲ್ಲಿ ವಿಷವನ್ನೇ ತಿನ್ನಿಸಲು ಮುಂದಾಗಿದ್ದ. ಅದೂ ಕೇಕ್‌ನಲ್ಲಿ ವಿಷ ಬೆರೆಸಿ!