ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ರಣಬಾಲಿ' ಸಿನಿಮಾ ಇಂದು ಮುಂಜಾನೆ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬಂದಿದೆ. ಬೆಂಗಳೂರಿನ ಸಂಧ್ಯಾ ಥಿಯೇಟರ್‌ನಲ್ಲಿ ಬೆಳಗ್ಗೆ 6:05ಕ್ಕೇ ಫಸ್ಟ್ ಡೇ ಫಸ್ಟ್ ಶೋ (FDFS) ಶುರುವಾಗಿದ್ದರೆ, ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ 8:40ರಿಂದ 10:00 ಗಂಟೆಯ ನಡುವೆ ಪ್ರದರ್ಶನಗಳು ಆರಂಭವಾಗಿವೆ.